ಗ್ರಾಮಿಣ ಭಾಗದ ಜನರಿಗೆ ಸೋಲಾರ ಮೂಲಕ ನವಿಕರಿಸುವ ಇಂಧನದ ಮಹತ್ವದ ಮತ್ತು ಉಪಯೋಗದ ಅರಿವುನ್ನು ಮುಡಿಸುವ ಮೂಲಕ ಸರಕಾರದ ಮುಖ್ಯ ಉದ್ದೇಶವನ್ನು ಅನುಷ್ಠಾನಕ್ಕೆ ತರುವ ಮೂಲಕ ರಾಜ್ಯಮಟ್ಟದ ಮೋದಲ ಸೋಲರ ಬೀದಿ ದೀಪ ಗ್ರಾಮಪಂಚಾಯತ ಎಂದು ಹೆಸರುವಾಸಿಯಾಗಿದೆ.
ಸೋಲಾರ ಬೀದಿ ದೀಪಗಳ ಮೂಲಕ ಪ್ರತಿವರ್ಷ ಸುಮಾರು 20 ಲಕ್ಷ ವಿದ್ಯುತ ಬಿಲ್ ( ಸರಕಾರದ ಹಣದ ಉಳಿತಾಯ) ಮತ್ತು ವಿದ್ಯತ ಅನಗತ್ಯ ವ್ಯರ್ಥವಾಗುವುದನ್ನು ತಡೆದು. ರಾತ್ರಿ ಬೇಳಕಿನಲ್ಲಿ ಗ್ರಾಮ ಕಂಗೊಳಿಸುವಂತೆ ಮಾಡಲಾಗಿದೆ.
ರಾಜ್ಯದಲ್ಲಿಯೆ ಮಾದರಿ ಸೋಲಾರ್ ಗ್ರಾಮ ಪಂಚಾಯತನ್ನಾಗಿ ಗ್ರಾಮೀಣ ಇಲಾಖೆ ಕರ್ನಾಟಕ ಸರಕಾರದಿಂದ ಗುರುತಿಸಲಾಗಿದ್ದು ಹಲವು ಕಡೆ ಸೋಲರ್ ಅಳವಡಿಸುವುಂತೆ ಮಾನ್ಯ ಗ್ರಾಮೀಣಭಿವ್ರದ್ದಿ ಇಲಾಖೆ ಸಚಿವರು ಈ ಕುರಿತು ಆದೆಸಿಸಿದ್ದಾರೆ.
ಯಾವುದೆ ವಿಶೆಷ ಅನುದಾನವಿಲ್ಲದೆ ಒಂದು ಪಂಚಾಯತನ್ನು ಅತ್ಮನಿರ್ಭಾರ ಎಂಬ ಪ್ರಧಾನಿಗಳ ಮಹತ್ವಕಾಂಕ್ಷೆ ಹೆಜ್ಜೆಗೆ ಕೈಜೋಡಿಸಬುದೆಂಬ ಬಲವಾದ ಉದಾಹರಣೆ .
ಪಂಚಾಯತ್ ಅಭಿವ್ರದ್ದಿ ಅಧಿಕಾರಿಗಳನ್ನು ರಾಜ್ಯಮಟ್ಟದ ಸೋಲಾರ್ ಅನುಷ್ಠಾನ ಕಮಿಟಿ ಸದಸ್ಯರನ್ನಾಗಿ ನೇಮಿಸಲಾಗಿದೆ. ಈ ಮೂಲಕ ಸೋಲಾರ ಪಿಡಿಓ ಎಂದು ಜನ ಮತ್ತು ಮಾದ್ಯಮಗಳು ಸ್ಪೈಡರ್ಮ್ಯಾನ್, ಬ್ಯಾಡಮ್ಯಾನ್ ಯುಗದಲ್ಲಿ ಸೋಲರ್ ಮ್ಯಾನ ಅಗತ್ತೆತೆಯನ್ನು ಗುರುತಿಸಿದ್ದಾರೆ.
ಧುಪತಮಾಹಗಾಂವ ಸೋಲಾರ ಸಾಧನೆಗೆ ನಾಡಿನ ಪ್ರಮುಖ ಸುದ್ದಿ ಮಾದ್ಯಮಗಳಾದ ಪಬ್ಲಿಕ ಟಿವಿ, ಈ-ಟಿವಿ, ಸುವರ್ಣ ಟಿವಿ , ಟಿವಿ9 ವಿಶೇಷ ಸುದ್ದಿ ಮಾಡಿವೆ.ಪ್ರಜವಾಣಿ,ವಿಜಯವಾಣಿ ವಿಜಯ ಕರ್ನಾಟಕ ಮತ್ತು ಇತರೆ ಪತ್ರಿಕೆಗಳು ವಿಶೇಷವಾಗಿ ಗುರುತಿಸಿ ಪ್ರೋತ್ಸಾಹಿಸಿವೆ.