ಧುಪತಮಹಾಗಾಂವ್ 12 ಶತಮಾನದ ಶರಣರ ಕ್ರಾಂತಿಯ ಹಿನ್ನೆಲೆಯುಳ್ಳ ಒಂದು ಐತಿಹಾಸಿಕ ಕುಗ್ರಾಮವಾಗಿದ್ದು. ಬೀದರ ಜಿಲ್ಲೆಯಿಂದ ಸುಮಾರು 35 ಕಿ.ಮಿ ದೂರವಿದ್ದು ತಾಲುಕಿನಿಂದ ಸುಮಾರು 15 ಕಿ.ಮಿ. ದೂರವಿದೆ. ಒಟ್ಟು 4 ಹಳ್ಳಿಗಳು ಮತ್ತು 2 ಎರಡು ತಾಂಡಗಳನ್ನು ಒಳಗೊಂಡಿದ್ದು ಸುಮಾರು 6000 ಕ್ಕು ಅಧಿಕ ಜನಸಂಖ್ಯೆಯನ್ನು ಹೊಂದಿದೆ.
ರಾಜ್ಯಮಟ್ಟದಲ್ಲಿ ಸೋಲರ್ ಪಂಚಾಯತ್ ಎಂದು ಹೇಸರುಮಾಡಿರುವ ನಿಟ್ಟಿನಲ್ಲಿ ನಿರಂತರ ಸೇವೆಯನ್ನು ಜನರಿಗೆ ನಿಡಿ ಸೋಲಾರ್ ಸದ್ಬಳಕೇಗೆ ಎಲ್ಲ ಸದಸ್ಯರನ್ನು ಪ್ರೇರೆಪಿಸಿ ಸೋಲರ್ ಕೇಲಸಗಳನ್ನ ಈಗಿನ ಯುವ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಜೊನ್ನೆಕೆರೆಯವರು ಮಾದರಿಯಾಗಿ ಮುಂದೆ ವರಿಸಿದ್ದಾರೆ. ಇದಕ್ಕೆ ಬೀದರ ನ ಖ್ಯಾತ ಸ್ವಯಂ ಸೇವಾ ಸಂಸ್ಥೆಯಾದ ಕ್ರಿಯೇಟಿವ್ ಫೌಂಡೆಶನ್ ಸಂಸ್ಥೆಯ ಅಧ್ಯಕ್ಷರಾದ ಸಾಗರ.ಎಸ್.ಆರ್ ತಾಂತ್ರಿಕ ಮಾರ್ಗದರ್ಶನವನ್ನು ಮತ್ತು ನಿರ್ವಹಣೆ ನಿಡುತ್ತಿದ್ದಾರೆ.
ರಾಜ್ಯಮಟ್ಟದಲ್ಲಿ ಸೋಲರ್ ಪಂಚಾಯತ್ ಎಂದು ಹೇಸರುಮಾಡಿರುವ ನಿಟ್ಟಿನಲ್ಲಿ ನಿರಂತರ ಸೇವೆಯನ್ನು ಜನರಿಗೆ ನಿಡಿ ಸೋಲಾರ್ ಸದ್ಬಳಕೇಗೆ ಎಲ್ಲ ಸದಸ್ಯರನ್ನು ಪ್ರೇರೆಪಿಸಿ ಸೋಲರ್ ಕೇಲಸಗಳನ್ನ ಈಗಿನ ಯುವ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಜೊನ್ನೆಕೆರೆಯವರು ಮಾದರಿಯಾಗಿ ಮುಂದೆ ವರಿಸಿದ್ದಾರೆ. ಇದಕ್ಕೆ ಬೀದರ ನ ಖ್ಯಾತ ಸ್ವಯಂ ಸೇವಾ ಸಂಸ್ಥೆಯಾದ ಕ್ರಿಯೇಟಿವ್ ಫೌಂಡೆಶನ್ ಸಂಸ್ಥೆಯ ಅಧ್ಯಕ್ಷರಾದ ಸಾಗರ.ಎಸ್.ಆರ್ ತಾಂತ್ರಿಕ ಮಾರ್ಗದರ್ಶನವನ್ನು ಮತ್ತು ನಿರ್ವಹಣೆ ನಿಡುತ್ತಿದ್ದಾರೆ.
ಧೂಪತಮಾಹಾಗಾಂವ ಗ್ರಾಮ ಪಂಚಾಯತ್ ಗ್ರಾಮಗಳಾದ ಧೂಪತಮಾಹಾಗಾಂವ, ಜೀರ್ಗಾ, ಬಾಬಳಿ , ಮಣಿಗೆಂಪೂರ ಮತ್ತು ಎರಡು ತಾಂಡಗಳ ಪರಿಶಿಲನೆಮಾಡಿ ಸುಮಾರು 250 ಕಂಬಗಳಿಗೆ ಸೋಲಾರ ಬೀದಿ ದೀಪಗಳನ್ನು ಹಂತಹಂತವಾಗಿ ಕೇವಲ ಪಂಚಾಯತ ಅನುದಾನದಡಿಯಲ್ಲಿಇಂದು ಎಲ್ಲ ಕಂಬಗಳು ಸೋಲಾರ ಬೀದಿದೀಪಗಳಾಗಿ ಬದಲಾಗಿದ್ದು ಗ್ರಾಮದ ಜನರಿಗೆ ವಿದ್ಯತ ವ್ಯತಯದ ಸಮಸ್ಯೆಯಿಂದ ಹೊರಬಂದಂತಾಗಿದೆ.
ಮೋದಲ ಹಂತದಲ್ಲಿ ಧೂಪತಮಾಹಾಗಾಂವ ಗ್ರಾಮ ಪಂಚಾಯತ್ ಕಛೇರಿಯನ್ನು ಸೋಲರ್ ಕಛೇರಿಯನ್ನಾಗಿ ಪರಿವರ್ತಿಸಿ ಗ್ರಾಮದ ಜನರಿಗೆ ಸುಗಮವಾಗಿ ಮತ್ತು ನಿರಂತರವಾಗಿ ಸೇವೆಯನ್ನು ನಿಡಲು ಮತ್ತು ಸಿಬ್ಬಂದಿ ಚುರುಕಾಗಿ ಕೆಲಸಮಾಡಲು ನೆರವಾಯಿತು. 2ಕಿ.ವ್ಯಾ. ಸಾಮಾರ್ಥ್ಯದ ಆಫ್ ಗ್ರೀಡ ಸೋಲರನ್ನು ಅಳವಡಿಸುವ ಮೋಲಕ ಕಛೇರಿಯ ವಿದ್ಯತ ಸಾಮಾಗ್ರಿಗಳು ಸೋಲರ ಮೇಲೆ ಕಾರ್ಯನಿರ್ವಹಿಸುತ್ತಿದ್ದು ಸುಮಾರು 2500 ಸಾವಿರ ವಿದ್ಯತ್ ಬಿಲ್ಲನ್ನು ಪ್ರತಿತಿಂಗಳು ಉಳಿತಾಯವಾಗುತ್ತಿದೆ.
ಧೂಪತಮಾಹಾಗಾಂವ ಗ್ರಾಮ ಪಂಚಾಯತ್ ಅಡಿಯಲ್ಲಿ ಜೀರ್ಗಾ ಗ್ರಾಮದಲ್ಲಿ ಅನೇಕ ಬಡಕುಟುಂಬದ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದನ್ನು ತಡೆಯಲು ಸುಸಜ್ಜಿತವಾದ , ಹಲವು ಆಟಿಕೆ ಸಾಮಾನುಗಳನ್ನೋಳಗೊಂಡ ಮತ್ತು ಸೋಲರ ಅವಲಂಬಿತ ಸೋಲಾರ ಸುಪರ್ ಅಂಗನವಾಡಿ ನಿರ್ಮಿಸಲಾಗಿದೆ.ಈ ಮೂಲಕ ಸರಕಾರದ ಮೂಲ ಅಂಶಗಳಾದ ಪೋಶಕಾಂಶ, ನಲಿ-ಕಲಿ, ಶುಧ್ಧ ಕುಡಿಯುವ ನೀರು, ಸ್ವಚ್ಛಭಾರತ ಮೀಶನ್ , ಸೋಲಾರ ಆಧರಿತ ಅಂಗನವಾಡಿ ನಿರ್ಮಿಸಿ ರಾಜ್ಯದ ಗಮನ ಸೇಳೆಯಲಾಗಿದೆ.
ಕರೋನದಂತಹ ಮಾಹಾಮಾರಿಯಲ್ಲಿ ಶಿಕ್ಷಣದಿಂದ ವಂಚಿತರಾಗಿದಲ್ಲದೆ, ಸರಕಾರಿ ಉದ್ಯೊಗಕ್ಕೆ ಸಿದ್ದತೆ ನಡೆಸಲು ಅನೇಕ ಯುವಕರು ಪರದಾಡಬೇಕಾಗಿದೆ. ನಿರಂತರ ಓದುವಿಕೆಗೆ ವಿದ್ಯುತ ಸಮಸ್ಯೆಯಾದಕಾರಣ ಸಂಪೂರ್ಣ ಸೋಲಾರ ಡಿಜಿಟಲ್ ಲೈಬ್ರೇರಿ ನಿರ್ಮಿಸಿ ಓದುಗರರಿಗೆ ವರದಾನವಾಗಿದೆ.
ದಿ .ಮಾರ್ಚ 22-2021 ವಿಶ್ವಜಲ ದನಾಚರಣೆ ದಿನದಂದು ಕರ್ನಾಟಕದ ಬೀದರ ಜಿಲ್ಲೆಯೆ ಧೂಪತಮಾಹಾಗಾಂವ ಗ್ರಾಮ ಪಂಚಾಯತ್ ಯುವ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಜೊನ್ನೆಕೆರೆಯವರು ಮಾನ್ಯ ದೇಶದ ಹೆಮ್ಮೆಯ ಪ್ರಧಾನಿಗಳೊಂದಿಗೆ ಸಂವಾದ ನಡೆಸಿ ಮನರೇಗಾ ಯೋಜನೆಯಡಿಯಲ್ಲಿ ಕೇವಲ 10 ಲಕ್ಷದಲ್ಲಿ ಪಾಳು ಕೇರೆಯ ಪುನರುತ್ಥಾನ ಮಾಡಿ ಪ್ರಧಾನಿಗಳ ಮೆಚ್ಚುಗೆ ಪಡೆದ ಸವಿ ನೇನಪಿಗಾಗಿ ಪ್ರಧಾನಮಂತ್ರಿ ಸೋಲಾರ ವಾಕಿಂಗ ಟ್ರ್ಯಾಕ್ ನಿರ್ಮಿಸಲಾಗುತ್ತಿದ್ದು ಕಾರ್ಯ ಪ್ರಗತಿಯಲ್ಲಿದೆ.