About us

“ಕರ್ನಾಟದ ಮೋದಲ ಸಂಪೂರ್ಣ ಸೋಲಾರ್ ಬೀದಿ ದೀಪ ಗ್ರಾಮಪಂಚಾಯತ್ ಯಶಸ್ವಿ ಕಥೆ”

ಗ್ರಾಮ ಪಂಚಾಯತ್  ಧುಪತಮಹಾಗಾಂವ್ ಹಿನ್ನೆಲೆ :

             ಧುಪತಮಹಾಗಾಂವ್ 12 ಶತಮಾನದ ಶರಣರ ಕ್ರಾಂತಿಯ ಹಿನ್ನೆಲೆಯುಳ್ಳ ಒಂದು ಐತಿಹಾಸಿಕ ಕುಗ್ರಾಮವಾಗಿದ್ದು. ಬೀದರ ಜಿಲ್ಲೆಯಿಂದ ಸುಮಾರು 35 ಕಿ.ಮಿ ದೂರವಿದ್ದು ತಾಲುಕಿನಿಂದ ಸುಮಾರು 15 ಕಿ.ಮಿ. ದೂರವಿದೆ. ಒಟ್ಟು 4 ಹಳ್ಳಿಗಳು ಮತ್ತು 2   ಎರಡು ತಾಂಡಗಳನ್ನು ಒಳಗೊಂಡಿದ್ದು ಸುಮಾರು 6000 ಕ್ಕು ಅಧಿಕ ಜನಸಂಖ್ಯೆಯನ್ನು ಹೊಂದಿದೆ.

ಸೋಲಾರ ಕ್ರಾಂತಿಯ ಹಿನ್ನಲೆ :  

ಧುಪತಮಹಾಗಾಂವ್ ಗ್ರಾಮಪಂಚಾಯತ 13 ಸದಸ್ಯರನ್ನು ಹೊಂದಿದ್ದು ಎಪ್ರೀಲ್ 2019 ರ ಸಾಮಾನ್ಯ ಸಭೆಯಲ್ಲಿ ಪಂಚಾಯತನಲ್ಲಿ ಮಾಡಬಹುದಾದ ಅಭಿವೃದ್ಧಿ ಕೇಲಸಗಳ ಚರ್ಚೆಯಲ್ಲಿ ಸುಮಾರು 67 ಲಕ್ಷದ ವಿದ್ಯೂತ ಬಿಲ್ (ಜೆಸ್ಕಾಮ್) ಬಾಕಿ ಇರುವುದು ಮತ್ತು ಗ್ರಾಮದಲ್ಲಿ ಸಮರ್ಪಕ ವಿದ್ಯುತ್ ಪೋರೈಕೆಯಾಗದಿರುವುದು ಎಲ್ಲರಿಗು ಅತ್ಯಂತ ದೊಡ್ಡ ಸಮಸ್ಯೆಯಾಗಿ ಕಾಡಿತ್ತು. ಗ್ರಾಮ ಪಂಚಾಯತಿಯ ಅಭಿವೃದ್ಧಿಗೆ ಬಳಕೆಯಾಗಬೇಕಾದ ಶೆ.25 ಹಣ ವಿದ್ಯುತ ಬಿಲ್ ಗೆ ಪೋಲಾಗುತ್ತಿರುವುದು ಎಲ್ಲರಿಗು ಕಳವಳ ಉಂಟು ಮಾಡಿತ್ತು .  ಈ ಸಮಸ್ಯೆಯಿಂದ ಮುಕ್ತರಾಗಲು ಪಣತೊಟ್ಟಿದ  ಅಲ್ಲಿನ  ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸವಿತಾ ಬಸವರಾಜ ,  ಉಪಧ್ಯಕ್ಷರಾದ ನೇಹೆರು ಬೀರಾದರ ಮತ್ತು ಸದಸ್ಯರರಿಗೆ ಸಮಸ್ಯಗೆ ರಾಮಬಾಣವಾಗುವಂತೆ ಅಲ್ಲಿನ ಕ್ರೀಯಾಶೀಲ ಪಂಚಾಯತ ಅಭಿವೃದ್ಧಿ ಅಧಿಕಾರಿ ಶ್ರೀ. ಶಿವಾನಂದ ಔರಾದೆ ಯವರು ನಮ್ಮ ಪಂಚಾಯತನ್ನು ಮಾದರಿ ಸೋಲಾರ ಪಂಚಾಯತನ್ನಾಗಿ ಮಾಡುವ ಮಹತ್ವದ ಐಡಿಯಾ ಪ್ರಸ್ತಾಪಿಸಿದರು. ಜನಪರ ಕೇಲಸಗಳಿಂದ ಉತ್ತಮ ಅಧಿಕಾರಿಯಾಗಿ ಗುರುತಿಸಿಕೋಂಡಿರುವ ಕಾರಣ ಹೊಸ ಕೇಲಸಕ್ಕೆ ಪ್ರೋತ್ಸಹ ನೀಡುವ ನಿಟ್ಟಿನಲ್ಲಿ  ಎಲ್ಲರು ಒಗ್ಗಟ್ಟಿನ ನಿರ್ಣಯ ತೆಗೆದುಕೊಂಡರು.ಕೇಂದ್ರ ಸರಕಾರದ 14 ನೆ ಮತ್ತು 15 ನೆ ಹಣಕಾಸಿನ ಅನುದಾನವನ್ನು ಹಂತ ಹಂತವಾಗಿ ಮೋದಲು ಗ್ರಾಮಪಂಚಾಯ ಕಛೇರಿ, ನಾಲ್ಕು ಗ್ರಾಮ ಮತ್ತು  ಎರಡು ತಾಂಡಗಳ ಬೀದಿ ದೀಪಗಳು ಸೌರವಿದ್ಯುತಿಕರಣ ಮಾಡಲು ಮಹತ್ವದ ಹೆಜ್ಜೆಯನಿಟ್ಟರು. ಈ ನಿಟ್ಟಿನಲ್ಲಿ ಅಲ್ಲಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರಿ.ಶಿವಾನಂದ ಔರಾದೆ ನವಿಕರಿಸಬಹುದಾದ ಇಂಧನಗಳ ಸಮರ್ಪಕವಾದ ಬಳಕೆಯ ತರಬೇತಿಯನ್ನು ಗ್ರಾಮೀಣ ಅಭಿವ್ರದ್ದ ಮತ್ತು ಪಂಚಾಯತರಾಜ ಇಲಾಖೆಯ ಅಧಿನದದಡಿಯಲ್ಲಿನ ನಡೆಯುವ ಅಬ್ದುಲ್ ನಜೇರಸಾಬ ರಜ್ಯ ಗ್ರಾಮೀಣಭಿವ್ರದ್ದಿ ಸಂಸ್ಥೆ ಮೈಸುರು ಮತ್ತು “ಮಾಹಾತ್ಮಾಗಾಂಧಿ ನವಿಕರಿಸಬುದಾದ ಇಂಧನಗಳ ತರಬೇತಿ ಸಂಸ್ಥೆ ಜಕ್ಕುರು,ಬೆಂಗಳೂರುವತಿಯಿಂದ ತರಬೇತಿ ಪಡೆದಿರುವುದು ವರದಾನವಾಯಿತು. ಅಲ್ಲಿನ ಜ್ಞಾನವನ್ನುಈ ಯೋಜನೆಯ ಯಶಸ್ವಿಗಾಗಿ ಹಗಲಿರಳೆನ್ನದೆ ಸೋಲಾರ ಮಾರ್ಗದ ಪರಿಹಾರಕ್ಕಾಗಿ ಕಾರ್ಯಪ್ರವ್ರತರಾದರು. ಧೂಪತಮಾಹಾಗಾಂವ ಗ್ರಾಮ ಪಂಚಾಯತ್ ಇಂದು ಸಂಪೂರ್ಣ ಸೋಲರ ಬೀದಿದೀಪ ಪಂಚಾಯತ್ತಾಗಿರುವುದು ಯಾವುದೆ ವಿಶೇಷ ಅನುದಾನದಲ್ಲಿ ವಿಲ್ಲದೆ ಧುಪತಮಾಹಾಗಾಂವ ರಾಜ್ಯದ ಸಂಪೂರ್ಣ ಸೋಲಾರ್ ಗ್ರಾಮಪಂಚಾಯತ ಅಗಿರುವುದು ಗಮನಾರ್ಹ. ಸಹಜವಾಗಿ ಕೇಂದ್ರ ಸರಕಾರದ  14 ಮತ್ತು 15 ನೆ ಹಣಕಾಸಿನ  ಅನುದಾನ ಮತ್ತು ಪಂಚಾಯತ ಜನರ ತೇರಿಗೆ ಹಣವನ್ನು ಬಳಿಸಿಕೋಂಡು ಹಂತ ಹಂತವಾಗಿ ಮಾಡಲಾಗಿದೆ.ಇಂತಹ ಕೇಲಸಕ್ಕೆ ಮೇಲಧಿಕಾರಿಗಳಾದ ತಾಲುಕ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಮಾಣಿಕರಾವ ಪಾಟಿಲ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಜ್ಞಾನೆಂದ್ರಕುಮಾರ ಗಂಗವಾರ ,ಶ್ರೀಮತಿ ಜಹಿರಾ ನಸೀಮ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಸಕಾಲಕ್ಕೆ ಮಾರ್ಗದರ್ಶನ ನೀಡಿದರು.

ರಾಜ್ಯಮಟ್ಟದಲ್ಲಿ ಸೋಲರ್ ಪಂಚಾಯತ್ ಎಂದು ಹೇಸರುಮಾಡಿರುವ ನಿಟ್ಟಿನಲ್ಲಿ ನಿರಂತರ  ಸೇವೆಯನ್ನು ಜನರಿಗೆ ನಿಡಿ ಸೋಲಾರ್ ಸದ್ಬಳಕೇಗೆ ಎಲ್ಲ ಸದಸ್ಯರನ್ನು ಪ್ರೇರೆಪಿಸಿ ಸೋಲರ್ ಕೇಲಸಗಳನ್ನ ಈಗಿನ ಯುವ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಜೊನ್ನೆಕೆರೆಯವರು ಮಾದರಿಯಾಗಿ ಮುಂದೆ ವರಿಸಿದ್ದಾರೆ. ಇದಕ್ಕೆ ಬೀದರ ನ ಖ್ಯಾತ  ಸ್ವಯಂ ಸೇವಾ ಸಂಸ್ಥೆಯಾದ ಕ್ರಿಯೇಟಿವ್ ಫೌಂಡೆಶನ್ ಸಂಸ್ಥೆಯ ಅಧ್ಯಕ್ಷರಾದ ಸಾಗರ.ಎಸ್.ಆರ್ ತಾಂತ್ರಿಕ ಮಾರ್ಗದರ್ಶನವನ್ನು ಮತ್ತು ನಿರ್ವಹಣೆ  ನಿಡುತ್ತಿದ್ದಾರೆ.